Widgets Magazine

ಕುಡುಕರಿಗೆ ವೇರಿ ಬ್ಯಾಡ್ ನ್ಯೂಸ್

ಹಾಸನ| Jagadeesh| Last Modified ಶನಿವಾರ, 23 ಮೇ 2020 (12:21 IST)
ಕುಡುಕರಿಗೆ ಕಹಿ ಸುದ್ದಿಯೊಂದು ಬಂದಿದ್ದು, ಈ ಸುದ್ದಿ ನಿತ್ಯ ಕುಡಿಯೋರನ್ನು ಚಿಂತೆಗೆ ದೂಡಲಿದೆ.

ರಾಜ್ಯ ಸರ್ಕಾರದ ಆದೇಶದಂತೆ ಮೇ 31 ರವರೆಗೆ ಲಾಕ್‍ಡೌನ್ ಅವಧಿಯನ್ನು ಮುಂದುವರೆಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಉಲ್ಲೇಖ(2)ರ ರಾಜ್ಯ ಸರ್ಕಾರಿಂದ ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಎಲ್ಲಾ ಚಟುವಟಿಕೆಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುತ್ತದೆ.

ಲಾಕ್‍ಡೌನ್ ಅವಧಿಯಲ್ಲಿ ಭಾನುವಾರದಂದು ಹೆಚ್ಚುವರಿಯಾಗಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳನ್ನು ಮತ್ತು  ವ್ಯಕ್ತಿಗಳ ಸಂಚಾರವನ್ನು ಹಾಸನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್. ಗಿರೀಶ್ ಅವರು ನಿಷೇಧಿಸಿದ್ದಾರೆ.

ಲಾಕ್‍ಡೌನ್ ಆವಧಿಯಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಬಗೆಯ ಪರವಾನಗಿ ಇರುವ ಎಲ್ಲಾ ಮದ್ಯದ ಅಂಗಡಿಗಳನ್ನು ಪ್ರತಿ ಭಾನುವಾರದಂದು ಪೂರ್ಣ ದಿನ ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್. ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :