ಬೆಂಗಳೂರು: ಕಂಬಳ ಕ್ರೀಡೆ ನಿಷೇಧ ಮತ್ತು ಮಹದಾಯಿ ಯೋಜನೆಯ ಜಾರಿಗೆ ಒತ್ತಾಯಿಸಿ ಫೆಬ್ರವರಿ 18 ರಂದು ಕರ್ನಾಟಕ ಬಂದ್ ಗೆ ಕನ್ನಡ ನಾಡು ಪಕ್ಷದ ನಾಯಕ ವಾಟಾಳ್ ನಾಗರಾಜ್ ಕರೆಕೊಟ್ಟಿದ್ದಾರೆ. ನಮ್ಮ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಜಲ್ಲಿಕಟ್ಟು ಹಿಂಸಾತ್ಮಕ ಕ್ರೀಡೆಯಾದರೂ, ತಮಿಳರ ಪ್ರತಿಭಟನೆಗೆ ಜಗ್ಗಿದ ಕೇಂದ್ರ ನಿಷೇಧ ತೆರವುಗೊಳಿಸಲು ಮುಂದಾಗಿದೆ. ಆದರೆ ರಾಜ್ಯದಲ್ಲಿ ನಡೆಯುವ ನಮ್ಮ ಸಾಂಸ್ಕೃತಿಕ ಕಲೆಯನ್ನು ಬಿಂಬಿಸುವ ಗ್ರಾಮೀಣ ಕಲೆಯನ್ನು