ಚಾಮರಾಜನಗರ : ಶಾಸ್ತ್ರಿಗಳು ಮುಂದಿನ ಮುಖ್ಯಮಂತ್ರಿ ನಾನೇ ಎಂದು ಭವಿಷ್ಯ ನುಡಿದಿರುವುದಾಗಿ ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ. ಶಾಸ್ತ್ರಿಗಳು ಹೇಳೋ ಪ್ರಕಾರ ನಾನು ಸಿಎಂ ಆಗೋದು ಖಚಿತ. ನಾನು ಸಿಎಂ ಆದರೆ ಚಾಮರಾಜನಗರಕ್ಕೆ ಕೀರ್ತಿ. ಮತಕ್ಕಾಗಿ ಯಾರೇ ಹಣ ನೀಡಿದರೂ ಬೇಡಾ ಎನ್ನಬೇಡಿ. ಹಣ ಕೊಡುವವರಿಂದ ಹಣ ಪಡೆಯಿರಿ. ಹಣ ಪಡೆದು ಓಟು ನಿಮಗೆ ಸ್ವಾಮಿ ಅನ್ನಿ. ಆದರೆ ಮತ ಮಾತ್ರ ನನಗೆ ಹಾಕಿ.