ವಾಣಿಜ್ಯನಗರಿ ಖ್ಯಾತಿ ದೇಶಾದ್ಯಂತ ಎಲ್ಲೆಡೆಯೂ ಪಸರಿಸುತ್ತಿದೆ. ಹೈದರಾಬಾದ್ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿದೆ. ಇದರ ರೂವಾಗಿ ವಿಶ್ವನಾಥ ಸಜ್ಜನರ್ ಸಾಹಸಕ್ಕೆ ಗಂಡು ಮೆಟ್ಟಿದ ನಾಡಿನ ಕೀರ್ತಿಯೂ ಎಲ್ಲೆಡೆಯೂ ಹರಡುತ್ತಿದೆ. ಪೊಲೀಸ್ ಅಧಿಕಾರಿಯ ಮನೆಯಲ್ಲಿಯೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸಜ್ಜನರ್ ಮನೆಯಲ್ಲಿಯೂ ಕೂಡ ಸಂಭ್ರಮಾಚರಣೆ ಮೊಳಕೆ ಒಡೆದಿದೆ.ಮನೆಯಿಂದಲೇ ವಿಶ್ವನಾಥ ಸಜ್ಜನರ ಸಾಹಸಕ್ಕೆ ಹೆಚ್ಚಿನ ಪ್ರಶಂಸೆ ಹಾಗೂ ಕರ್ತವ್ಯ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯವಾಗಿದೆ.