ದುರ್ಗದ ನಗರದಿಂದ ಕಮಲ ಪಾಳೆಯದ ಅಭ್ಯರ್ಥಿ ಲೋಕ ಸಮರದಲ್ಲಿ ಗೆಲುವು ಸಾಧಿಸಿರುವುದಕ್ಕೆ ರಾಜ್ಯದ ಗಡಿ ಭಾಗದಲ್ಲಿ ವಿಜಯೋತ್ಸವ ಆಚರಣೆ ಮಾಡಲಾಗಿದೆ.ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಯಣಸ್ವಾಮಿ ಜಯಭೇರಿ ಹಿನ್ನಲೆಯಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ರು. ನಾರಾಯಣಸ್ವಾಮಿ ಯವರ ಸ್ವಕ್ಷೇತ್ರ ಆನೇಕಲ್ ಗೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಗೆಲುವು ದಾಖಲು ಮಾಡಿದ್ದಾರೆ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ.ಆನೇಕಲ್ ಪಟ್ಟಣದ