ಫೇಸ್ ಬುಕ್ ನಲ್ಲಿ ಹಾಕಿದ ವಿಡಿಯೋ ಮೂಲಕ ಐದು ವರ್ಷಗಳಿಂದ ಕುಟುಂಬದಿಂದ ದೂರ ಇದ್ದ ಮಾನಸಿಕ ಅಸ್ವಸ್ಥನೊಬ್ಬ ಮರಳಿ ಕುಟುಂಬ ಸೇರಿದ ಮನ ಮಿಡಿಯುವ ಘಟನೆ ನಡೆದಿದೆ.ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಈ ಘಟನೆ ನಡೆದಿದೆ. ಇಳಕಲ್ ಜೋಗಿ ಎಂದೇ ಹೆಸರಾಗಿದ್ದ ನರಸಿಂಹ ಎಂಬ ಮಾನಸಿಕ ಅಸ್ವಸ್ಥನನ್ನು ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋ ಮೂಲಕ ಗಮನಿಸಿದ ಕುಟುಂಬಸ್ಥರು ಮನೆಗೆ ಕರೆದೊಯ್ದಿದ್ದಾರೆ. ತಲೆ ತುಂಬ ಕೂದಲು ಬಿಟ್ಟುಕೊಂಡು ಹುಚ್ಚನಾಗಿದ್ದ ನರಸಿಂಹನನ್ನು ಎಲ್ಲರೂ