ಬೆಂಗಳೂರು: ತಾಯಿಯ ಕರುಳು ಮಗುವಿನ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗಬಲ್ಲದು ಎಂಬ ಮಾತಿದೆ. ಆದರೆ, ಆ ತಾಯಿ ತನ್ನ ಮಗುವಿನ ರಕ್ಷಣೆಗೆ ಸರ್ಕಾರದ ಕೆಲಸವನ್ನು ತಾನೇ ಕೈಗೆತ್ತಿಕೊಳ್ಳುವ ಸ್ಥಿತಿ ಬಂದರೆ, ಅದನ್ನು ಏನೆನ್ನಬೇಕು? ಬೆಂಗಳೂರಿನ ರಸ್ತೆಗಳಲ್ಲಿ ದಿನೇದಿನೇ ಪ್ರಾಣಾಪಾಯ ಒಡ್ಡುತ್ತಿರುವ ಭೀಕರ ರಸ್ತೆ ಗುಂಡಿಗಳಿಂದ ಬೇಸತ್ತ ತಾಯಿಯೊಬ್ಬರು, ತಾವೇ ಮಣ್ಣು ಮತ್ತು ಕಲ್ಲುಗಳನ್ನು ಹೊತ್ತು ತಂದು ರಸ್ತೆಯ ಗುಂಡಿಯನ್ನು ಮುಚ್ಚಿರುವ ಘಟನೆ ಈಗ ಇಡೀ ನಗರದ ಗಮನ ಸೆಳೆದಿದೆ.