ರಸ್ತೆ ಗುಂಡಿಗಳ ವಿರುದ್ಧ ಬೆಂಗಳೂರಿಗರು ಇಂದು ಫ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಯನ್ನ ಹಮ್ಮಿಕೊಂಡಿದರು.ಆಮ್ ಆದ್ಮಿ ಪಾರ್ಟಿಯ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು,ಬಿಬಿಎಂಪಿ ಮತ್ತು ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.ಧಿಕ್ಕಾರ ಧಿಕ್ಕಾರ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ತಮ್ಮ ಅಸಾಮಾಧಾನ ಹೊರಹಾಕಿದ್ದಾರೆ. ಎಲ್ಲಾ ವಿಚಾರದಲ್ಲೂ ಸರ್ಕಾರ ಪರ್ಸಂಟೇಜ್ ತೆಗೆದುಕೊಳ್ಳುತ್ತಿದೆ.ರಸ್ತೆ ಗುಂಡಿ ವಿಚಾರದಲ್ಲೂ ಸರ್ಕಾರ ಕೊಳ್ಳೆ ಹೊಡೆಯುತ್ತಿದೆ.ರಸ್ತೆಗುಂಡಿಗಳಿಂದ ಸಾಲುಸಾಲು ಅಪಘಾತಗಳು, ಸಾವುನೋವುಗಳು ಸಂಭವಿಸುತ್ತಿದೆ ಎಂದು ಪ್ರತಿಭಟನಾಕಾರರು