ವಿಜಯ್ ಮಲ್ಯ ಕನ್ನಡ ನೆಲದ ಮಣ್ಣಿನ ಮಗ: ದೇವೇಗೌಡ

ಬೆಂಗಳೂರು, ಶನಿವಾರ, 12 ಮಾರ್ಚ್ 2016 (15:09 IST)

ಮದ್ಯದ ದೊರೆ ಕರ್ನಾಟಕದ ಪುತ್ರನಾಗಿದ್ದು, ದೇಶದಿಂದ ಓಡಿಹೋಗುತ್ತಿಲ್ಲ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್‌.ಡಿ.ಹೇಳಿದ್ದಾರೆ.
 
ವಿಜಯ್ ಮಲ್ಯ ತಪ್ಪಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೌಡರು, ಜಾರಿ ನಿರ್ದೇಶನಾಲಯ ನೀಡಿದ ನೋಟಿಸ್‌ಗಳಿಗೆ ಈಗಾಗಲೇ ಉತ್ತರಿಸಿದ್ದಾರೆ ಎಂದು ತಿರುಗೇಟು ನೀಡಿದರು.
 
ಪ್ರಸಕ್ತ ಸಮಯದಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳು ನಷ್ಟವನ್ನು ಎದುರಿಸುತ್ತಿರುವುದರಿಂದ ಜಾಗತಿಕ ಮಟ್ಟದ ಒಬ್ಬ ಉದ್ಯಮಿಯನ್ನು ಗುರಿಯಾಗಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಜಾರಿ ನಿರ್ದೇಶನಾಲಯ, ವಿಜಯ್ ಮಲ್ಯ ಮತ್ತು ಕೆಲ ಕಿಂಗ್‌ಫಿಶರ್ ಉದ್ಯೋಗಿಗಳನ್ನು ಈಗಾಗಲೇ ಪ್ರಶ್ನಿಸಿದೆ. ಆದರೆ, ಮಲ್ಯ ದೇಶ ತೊರೆದು ವಿದೇಶಕ್ಕೆ ಹೋಗಿದ್ದಾರೆ ಎನ್ನುವ ವರದಿಗಳು ಸಂಸತ್ತಿನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದವು.
 
ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂಪಾಯಿ ಸಾಲ ಉಳಿಸಿಕೊಂಡಿರುವ ಮಲ್ಯ, ದೇಶದ ಸಂವಿಧಾನದಂತೆ ನಡೆಯುತ್ತೇನೆ. ಓಡಿಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ನಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿದ್ದರಿಂದ ವಿದೇಶಗಳಿಗೆ ಪ್ರಯಾಣಿಸುತ್ತಿರುತ್ತೇನೆ. ನಾನು ಭಾರತವನ್ನು ತೊರೆದು ಹೋಗಿಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಂಬರೀಷ್ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ: ದರ್ಶನ್

ಪತ್ನಿ ವಿಜಯಲಕ್ಷ್ಮಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಇಂದು ತ್ಯಾಗರಾಜನಗರ ಡಿಸಿಪಿ ಕಚೇರಿಯಲ್ಲಿ ...

news

ಉತ್ತರ ಕೊರಿಯಾದ ಜಲಾಂತರ್ಗಾಮಿ ನಾಪತ್ತೆ

ಸಿಯೋಲ್: ಉತ್ತರ ಕೊರಿಯಾದ ಜಲಾಂತರ್ಗಾಮಿಯೊಂದು ನಾಪತ್ತೆಯಾಗಿದ್ದು, ಜಂಟಿ ಸಮರಾಭ್ಯಾಸದಲ್ಲಿ ನಿರತವಾಗಿರುವ ...

news

ದೆವ್ವವೆಂದು ಭ್ರಮಿಸಿ ಮಹಿಳೆಯ ಕೊಲೆ

ಕರಾಳ ರಾತ್ರಿಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ದೆವ್ವವೆಂದು ಭಾವಿಸಿ ಮಾರಣಾಂತಿಕ ...

news

ಅತ್ಯಾಚಾರ ಯತ್ನ: ಯುವಕನಿಗೆ 5 ವರ್ಷ ಜೈಲು ಶಿಕ್ಷೆ

ಮುಜಾಫರ್‌ನಗರ: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗೆ ಇಲ್ಲಿನ ನ್ಯಾಯಾಲಯ ಐದು ವರ್ಷಗಳ ಜೈಲು ...