ನಟ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ವಿದೇಶಿ ಮಾರುಕಟ್ಟೆಯಲ್ಲಿ ಆಗಲೇ ಸದ್ದು ಮಾಡಲು ಆರಂಭಿಸಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಓವರ್ ಸೀಸ್ನಲ್ಲಿ ಈ ಚಿತ್ರದ ವಿತರಣೆ ಹಕ್ಕುಗಳು 10 ಕೋಟಿಗೆ ಮಾರಾಟಗೊಂಡಿವೆ. ಆ ಮೂಲಕ ಕನ್ನಡ ಚಿತ್ರವೊಂದು ಬಿಡುಗಡೆ ಆಗುವ ಮುನ್ನವೇ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟಗೊಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂಬುದು ಚಿತ್ರತಂಡದ ಉತ್ಸಾಹದ ಮಾತು. ವಿದೇಶದಲ್ಲಿ ಚಿತ್ರದ ಹಕ್ಕುಗಳನ್ನು ಒನ್ ಟ್ವೆಂಟಿ