ಎಚ್ಐವಿ ಪೀಡಿತೆ ಆತ್ಮಹತ್ಯೆ ಮಾಡಿಕೊಂಡಳೆಂದು ಕೆರೆಯ ನೀರನ್ನೇ ಖಾಲಿ ಮಾಡಿಸಿದ ಗ್ರಾಮಸ್ಥರು!

ಧಾರವಾಡ, ಗುರುವಾರ, 6 ಡಿಸೆಂಬರ್ 2018 (10:21 IST)

ಧಾರವಾಡ: ಎಚ್ಐವಿ ಬಗ್ಗೆ ಇನ್ನೂ ಜನರಿಗೆ ಸರಿಯಾದ ತಿಳುವಳಿಕೆ ಬಂದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಧಾರವಾಡದ ಗ್ರಾಮವೊಂದರಲ್ಲಿ ಎಚ್‍ಐವಿ ಪೀಡಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಕೆರೆಯನ್ನೇ ಬತ್ತಿಸಿದ ಘಟನೆ ನಡೆದಿದೆ.


 
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಂಕಿತ ಎಚ್ಐವಿ ಪೀಡಿತ ಮಹಿಳೆಯ ದೇಹ ಗ್ರಾಮದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕೆರೆಯ ನೀರು ಬಳಸಿದರೆ ತಮಗೂ ಎಚ್ಐವಿ ಹರಡಬಹುದು ಎಂಬ ಭಯದಿಂದ ಗ್ರಾಮಸ್ಥರು 36 ಎಕರೆಗಳಷ್ಟು ಬೃಹತ್ ವಿಸ್ತೀರ್ಣದ ಕೆರೆಯ ನೀರನ್ನೇ ಖಾಲಿ ಮಾಡಿದ್ದಾರೆ.
 
ಅಷ್ಟೇ ಅಲ್ಲ, ಈ ಕೆರೆಗೆ ಹೊಸ ನೀರು ಭರ್ತಿ ಮಾಡದೇ ತಾವು ಇದನ್ನು ಬಳಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಎಚ್ಐವಿ ನೀರಿನ ಮೂಲಕ ಹರಡುವುದಿಲ್ಲ ಎಂದು ಎಷ್ಟೇ ಹೇಳಿದರೂ ಗ್ರಾಮಸ್ಥರು ತಮ್ಮ ಪಟ್ಟು ಬಿಡುತ್ತಿಲ್ಲ. ಇದೀಗ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಾತ್ಕಾಲಿಕವಾಗಿ ಜನರ ನೀರಿನ ಅಗತ್ಯಕ್ಕೆ ಕೃಷ್ಣ ಕಾಲುವೆ ನೀರಿನ್ನು ಒದಗಿಸಲು ಸೌಕರ್ಯ ಮಾಡಿಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವ್ರಾಣೆ.. ನಾವು ಆಪರೇಷನ್ ಕಮಲ ಮಾಡ್ತಿಲ್ಲ: ಶಾಸಕ ಶ್ರೀರಾಮುಲು

ಬೆಂಗಳೂರು: ದೇವರಾಣೆ ಹೇಳ್ತಿದ್ದೀನಿ.. ನಾವು ಆಪರೇಷನ್ ಕಮಲ ಮಾಡ್ತಿಲ್ಲ. ಕಾಂಗ್ರೆಸ್ ನಮ್ಮ ಮೇಲೆ ಸುಳ್ಳು ...

news

ಪೋರ್ನ್ ವಿಡಿಯೋದಲ್ಲಿ ಕಂಡ ಮಹಿಳೆ ನೀನೇ ಎಂದು ಹಿಂಸಿಸುತ್ತಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?!

ಬೆಂಗಳೂರು: ಪೋರ್ನ್ ಸೈಟ್ ನೋಡುವ ಚಟಕ್ಕೆ ಬಿದ್ದ ಪತಿಯೊಬ್ಬ ಇದೀಗ ಪತ್ನಿಯನ್ನು ಕಳೆದುಕೊಳ್ಳುವ ...

news

ಹುಡುಗರ ಬಳಿ ಹುಡುಗಿಯರು ಮಾತನಾಡುವಂತಿಲ್ಲ! ಕಾಲೇಜೊಂದರ ವಿವಾದಾತ್ಮಕ ನಿರ್ಧಾರ

ನವದೆಹಲಿ: ಈ ಕಾಲೇಜಿನಲ್ಲಿ ಇನ್ನು ಮುಂದೆ ಹುಡುಗಿಯರು ಹುಡುಗರ ಜತೆ ಮಾತನಾಡುವಂತಿಲ್ಲ! ಹೀಗೊಂದು ...

news

ಅಗಸ್ಟಾ ವೆಸ್ಟ್ ಲ್ಯಾಂಡ್ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಬಾಯಿಂದ ಹೊರ ಬೀಳಲಿದೆ ಭಯಾನಕ ಸತ್ಯಗಳು ಎಂದ ಪ್ರಧಾನಿ ಮೋದಿ

ನವದೆಹಲಿ: ದುಬೈನಿಂದ ಗಡೀಪಾರಾದ ಭಾರತ ವಾಂಟೆಡ್ ಲಿಸ್ಟ್ ನಲ್ಲಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್ ...