ಚಿಕ್ಕಮಗಳೂರು ಜ.೭ ಕಸದ ವಿಲೇವಾರಿ ಗುಂಡಿಯನ್ನು ಗ್ರಾಮದಿಂದ ದೂರದ ಜಾಗದಲ್ಲಿ ತೆಗೆಯುವಂತೆ ಒತ್ತಾಯಿಸಿ ಹಲಸುಮನೆ ಗ್ರಾಮಸ್ಥರು ತಾಲ್ಲೂಕಿನ ಬಸ್ಕಲ್ ಗ್ರಾಮ ಪಂಚಾಯಿತಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಎದುರು ಜಮಾಯಿಸಿದ ಗ್ರಾಮಸ್ಥರು ಕಸದ ವಿಲೇವಾರಿ ಗುಂಡಿಯನ್ನು ಗ್ರಾಮದ ಮುಂಭಾಗದ ರಸ್ತೆಯಲ್ಲೇ ತೆಗೆಯಲು ಮುಂದಾಗಿರುವುದರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಮುಂಭಾಗದ ರಸ್ತೆಯಲ್ಲಿ ಕಸದ ಗುಂಡಿಯನ್ನು ಮಾಡುವುದರಿಂದ ದುರ್ವಾಸನೆ ಬೀರುತ್ತದೆ, ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ