ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು ಆಗಿದ್ದರೂ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಇಂದು ಕೂಡ ಬಿಡುಗಡೆ ಆಗುವುದು ಅನುಮಾನವಾಗಿದೆ. ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿನಯ ಕುಲಕರ್ಣಿ ಗೆ ಗುರುವಾರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಗುರುವಾರ ಸಂಜೆ ಜೈಲಿನಿಂದ ಹೊರಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜಾಮೀನು ಮಂಜೂರು ಆಗಿದ್ದರೂ ವಿನಯ್ ಶುಕ್ರವಾರ ಕೂಡ ಜೈಲಿನಿಂದ ಹೊರಬರುವುದು ಅನುಮಾನವಾಗಿದೆ. 2020ರ ನವೆಂಬರ್