ಧಾರವಾಡ : ರಾಜಕಾರಣ ಬರೀ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಂಗಾರಪ್ಪನಂಥವರಿಗೆ ಮಾತ್ರ ಸೀಮಿತವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮಕ್ಕಳೇ ರಾಜಕೀಯ ಮಾಡಬೇಕಾ? ಎಂದು ಕುಟುಂಬ ರಾಜಕಾರಣದ ವಿರುದ್ಧ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ನವ ನಿರ್ಮಾಣ ಸೇನೆ ಧಾರವಾಡದಲ್ಲಿ ಬುಧವಾರ ಆಯೋಜಿಸಿದ್ದ ಪ್ರತ್ಯೇಕ ರಾಜ್ಯಅಧಿಕಾರಕ್ಕೋ ಅಥವಾ ಅಭಿವೃದ್ಧಿಗೋ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರಾಜಕಾರಣ ಬರೀ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಂಗಾರಪ್ಪನಂಥವರಿಗೆ ಮಾತ್ರ ಸೀಮಿತವೇ?