ವರ್ಚುಯಲ್ ಕಲಿಕೆಯ ಕ್ಷೇತ್ರದಲ್ಲಿ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ)ನ ಹೊಸ ಅಧ್ಯಾಯ

jain university
ಬೆಂಗಳೂರು| Rajesh patil| Last Modified ಬುಧವಾರ, 29 ಏಪ್ರಿಲ್ 2020 (12:56 IST)
ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ತಮ್ಮ ಕ್ಯಾಂಪಸ್‍ಗಳನ್ನು ಮುಚ್ಚುವಂತಹ ಪರಿಸ್ಥಿತಿ ತಂದಿದ್ದು ವಿವಿಧ ವಿಶ್ವವಿದ್ಯಾಲಯಗಳು ತಮ್ಮ ನಿಯಮಿತ ತರಗತಿಗಳನ್ನು ಸ್ಥಗಿತಗೊಳಿಸಿವೆ ಮತ್ತು ಇ-ಕಲಿಕೆಗೆ ಬದಲಾಗಿವೆ. ಜೈನ್(ಡೀಮ್ಡ್-ಟು-ಬಿ ಯೂನಿವರ್ಸಿಟಿ) ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಅನುಷ್ಠಾನಗೊಳಿಸುವುದರಲ್ಲಿ ಮುಂಚೂಣಿಯಲ್ಲಿದ್ದು ಆನ್‍ಲೈನ್ ತರಗತಿಯ ಅನುಭವವನ್ನು ಹೆಚ್ಚಿಸಲಿದೆ.
ಪ್ರಾಜೆಕ್ಟ್-ಆಧರಿತ ಕಲಿಕೆ ಯೂನಿವರ್ಸಿಟಿ ಪರಿಚಯಿಸಿರುವ ಸದೃಢ ಕಾರ್ಯತಂತ್ರವಾಗಿದ್ದು ಈ ಆನ್‍ಲೈನ್ ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕೆಯ ಫಲಿತಾಂಶದತ್ತ ಕೊಂಡೊಯ್ಯುತ್ತದೆ. ಆನ್‍ಲೈನ್ ಗ್ರೂಪ್ ಪ್ರಾಜೆಕ್ಟ್‍ಗಳು ಮಾದರಿ ನೈಜ ಜಗತ್ತಿನ ಬಳಕೆಯಾಗಿರುವುದರಿಂದ ಯೂನಿವರ್ಸಿಟಿ ತನ್ನ ಉದ್ಯಮ ಪಾಲುದಾರರ ಸಹಯೋಗದಲ್ಲಿ ಪ್ರಾಜೆಕ್ಟ್‍ಗಳಿಗೆ ಅಪ್ಲಿಕೇಷನ್‍ಗಳು ಮತ್ತು ಪ್ರೋಗ್ರಾಮ್‍ಗಳನ್ನು ಸೃಷ್ಟಿಸಿದೆ.
 
 ಉದಾಹರಣೆಗೆ, ಜೈನ್(ಡೀಮ್ಡ್-ಟು-ಬಿ ಯೂನಿವರ್ಸಿಟಿ)ನ ಸ್ಕೂಲ್ ಆಫ್ ಸೈನ್ಸಸ್‍ನ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕೋವಿಡ್-19ರ ಸಂಶೋಧನಾ ಯೋಜನೆಗೆ ಆನ್‍ಲೈನ್‍ನಲ್ಲಿ ಸಹಯೋಗ ಹೊಂದಿದ್ದಾರೆ. ದೀಪ್ತಿ ಮತ್ತು ಡಾ.ಕೆ.ವಿ.ರಮೇಶ್ ಅವರ, ಬಯೋಇನ್ಫರ್ಮೇಟಿಕ್ಸ್ ವಿಭಾಗದ "ಬೈಂಡಿಂಗ್ ಸೈಟ್ ಅನಾಲಿಸಿಸ್ ಆಫ್ ಪೊಟೆನ್ಷಿಯಲ್ ಪ್ರೊಟೀಸ್ ಇನ್ಹಿಬಿಟರ್ಸ್ ಆಫ್ ಕೋವಿಡ್-19 ಯೂಸಿಂಗ್ ಆಟೊ ಡಾಕ್" ಸ್ಪ್ರಿಂಗರ್ ಜರ್ನಲ್‍ನಲ್ಲಿ ವೆಬ್ ಆಫ್ ಸೈನ್ಸಸ್‍ನ "ವೈರಸ್ ಡಿಸೀಸ್"(ಹಿಂದೆ ಇಂಡಿಯನ್ ಜರ್ನಲ್ ಆಫ್ ವೈರಾಲಜಿ)ನಲ್ಲಿ ಪ್ರಕಟಣೆಗೆ ಆಯ್ಕೆಯಾಗಿದೆ. ಈ ಸಾಂಕ್ರಾಮಿಕ ಕುರಿತಾದ ಜ್ಞಾನವನ್ನು ಇಡೀ ವಿಶ್ವಕ್ಕೆ ಹಂಚಿಕೊಳ್ಳುವ ಸ್ಪ್ರಿಂಗರ್‍ನ ಬದ್ಧತೆಯ ಭಾಗವಾಗಿ ಈ ಸಂಶೋಧನಾ ಪ್ರಬಂಧವನ್ನು ಸ್ಪ್ರಿಂಗರ್ ಪತ್ರಿಕೆಯು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಹಂಚಿಕೊಳ್ಳಲಿದೆ.
jain university
ಅಲ್ಲದೆ ಸಿಬ್ಬಂದಿಗೆ ಆನ್‍ಲೈನ್ ಸಹಯೋಗದಲ್ಲಿ ಸಂಯೋಜಿತ ಪ್ರಯತ್ನ ನಡೆಸಿ "ಡೆವಲಪ್‍ಮೆಂಟ್ ಆಫ್ ಇನ್‍ಎಕ್ಸ್‍ಪೆನ್ಸಿವ್ ಆಯಂಟಿ ವೈರಲ್ ಅಂಡ್ ಆಯಂಟಿ ಬ್ಯಾಕ್ಟೀರಿಯಲ್ ಫೇಸ್ ಮಾಸ್ಕ್ಸ್ ಬೈ ಯೂಸಿಂಗ್ ಕನ್ಫಾರ್ಮಲ್ ಕೋಟಿಂಗ್ ಸಿಯು2ಒ, ಸಿಯುಒ ಮತ್ತು ಜûಡ್‍ಎನ್‍ಒಸ್ ಆನ್‍ಟು ವೇರಬಲ್ ಫ್ಯಾಬ್ರಿಕ್ಸ್ ಪಾಲಿಮರ್ಸ್ ಅಂಡ್ 3ಡಿ ಕಾರ್ಬೊನೇಷಿಯಸ್ ಮೆಟೀರಿಯಲ್ಸ್" ಅನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನ್ಯಾನೊಮಿಷನ್ ವಿಭಾಗಕ್ಕೆ ಸಲ್ಲಿಸಲಾಗಿದೆ. ಜೈನ್(ಡೀಮ್ಡ್-ಟು-ಬಿ ಯೂನಿವರ್ಸಿಟಿ)ನ ಸೆಂಟರ್ ಆಫ್ ನ್ಯಾನೊ ಮೆಟೀರಿಯಲ್ ಸೈನ್ಸಸ್‍ನ ನಿರ್ದೇಶಕಿ ಡಾ.ಗೀತಾ ಬಾಲಕೃಷ್ಣ ಈ ಲೇಖನದ ದೃಷ್ಟಿಕೋನವು, ಕೊರೊನಾವೈರಸ್‍ನ ನಿಯಂತ್ರಿಸಲು ಓಜೋóನ್ ಬಳಸುವುದನ್ನು ಅಮೆರಿಕಾದ ಸಂಶೋಧನಾ ಪ್ರಯೋಗಾಲಯದ ಫಾರ್ಮಕಾಲಜಿ ವಿಭಾಗದ ಡಾ.ಎನ್.ಎಂ.ಸೌಮ್ಯ ಅವರ ಆನ್‍ಲೈನ್ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ.
 
"ಆನ್‍ಲೈನ್ ಪ್ಲಾಟ್‍ಫಾರಂನಲ್ಲಿ ನನ್ನ ಪಿಎಚ್.ಡಿ ವಿದ್ಯಾರ್ಥಿಗಳಿಂದ ಉನ್ನತ-ಮಟ್ಟದ ಜ್ಞಾನವನ್ನು ಸೃಷ್ಟಿಸಲು ಸಾಧ್ಯವಾಗಿದೆ ಎಂದು ಕಂಡುಕೊಳ್ಳಲು ನನಗೆ ಆಶ್ಚರ್ಯವಾಗಿದೆ. ನಾನು ಮುಖಾಮುಖಿ ಸಂವಹನವೇ ಕಲಿಯುವವರಿಗೆ ಅತ್ಯಂತ ಅಗತ್ಯ ಎಂದು ನಾನು ನಂಬಿದ್ದೆ" ಎಂದು ಸಿಎಂಎಸ್ ಬ್ಯುಸಿನೆಸ್ ಸ್ಕೂಲ್‍ನ ಡೀನ್(ಅಕಾಡೆಮಿಕ್ಸ್) ಡಾ.ಹೆರಾಲ್ಡ್ ಪ್ಯಾಟ್ರಿಕ್ ಹೇಳುತ್ತಾರೆ.
jain university
ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿ ಅರವಿಂಥ್ ಮಹೇಶ್, "ತರಗತಿಯಿಂದ ಆನ್‍ಲೈನ್ ಮಾಧ್ಯಮಕ್ಕೆ ಪರಿವರ್ತನೆ ಅತ್ಯಂತ ಸುಸೂತ್ರ ಮತ್ತು ಈ ಅನುಭವ ಅಸಾಧಾರಣವಾಗಿದೆ. ನಮ್ಮ ಪ್ರೊಫೆಸರ್‍ಗಳು ನಮಗೆ ಉಪನ್ಯಾಸ ತರಗತಿಗಳ ನಂತರವೂ ಲಭ್ಯವಿದ್ದಾರೆ. ಯೂನಿವರ್ಸಿಟಿ ಅಧಿಕಾರಿಗಳು ನಮ್ಮ ಎಲ್‍ಎಂಎಸ್ ಪ್ಲಾಟ್‍ಫಾರಂಗೆ ಸಂಯೋಜಿಸಬಲ್ಲ ಸದೃಢ ತಂತ್ರಜ್ಞಾನಕ್ಕೆ ಅವಕಾಶ ಕಲ್ಪಿಸಿರುವ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನಾನು ಪ್ರಶಂಸಿಸುತ್ತೇನೆ" ಎಂದರು.
 
ಯೂನಿವರ್ಸಿಟಿಯು ಆನ್‍ಲೈನ್ ಪ್ಲಾಟ್‍ಫಾರಂಗಳಾದ ಗೂಗಲ್ ಕ್ಲಾಸ್‍ರೂಮ್, ಗೂಗಲ್ ಹ್ಯಾಂಗೌಟ್ಸ್ ಮೀಟ್ ಅಲ್ಲದೆ ಪ್ರಾತ್ಯಕ್ಷಿಕೆಯ ಮೂಲಕ ಸಂವಹನಾಧಾರಿತ ಕಲಿಕೆ ಉತ್ತೇಜಿಸುವ ವಿಧಾನಗಳನ್ನೂ ತಂದಿದ್ದು ತರಗತಿಯಲ್ಲಿ ಕಲಿಕಾ ಅನುಭವ ಹೆಚ್ಚಿಸಿದೆ. ಉದಾಹರಣೆಗೆ, ವಿದ್ಯಾರ್ಥಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ಪಾಠದ ಭಾಗವಾಗಿ `ಭದ್ರತೆಯ ವಿಶೇಷತೆಗಳು' ಕುರಿತು ಬೋಧಿಸುವಾಗ ಸಿಬ್ಬಂದಿಯು ಕಲಿಯುವವರೊಂದಿಗೆ ಸಾಧನಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಎಡಬ್ಲ್ಯೂಎಸ್, ಸಿಸ್ಕೊ ಮತ್ತು ಮೈಕ್ರೊಸಾಫ್ಟ್ ಮುಂತಾದ ಪ್ಲಾಟ್‍ಫಾರಂಗಳ ಭದ್ರತಾ ವಿಶೇಷತೆಗಳನ್ನು ವಿಡಿಯೋ ಕಾನ್ಫರೆನ್ಸ್‍ನಲ್ಲಿ ಸಂವಹನಪೂರ್ವಕವಾಗಿ ಆವಿಷ್ಕರಿಸುತ್ತಾರೆ. ನಂತರ ವಿದ್ಯಾರ್ಥಿಗಳಿಗೆ ಕೋಡ್ ಬರೆಯಲು ಮತ್ತು ಫಲಿತಾಂಶವನ್ನು ಗೂಗಲ್ ಕ್ಲಾಸ್‍ರೂಮ್‍ನಲ್ಲಿ ಹಂಚಿಕೊಳ್ಳಲು ಉತ್ತೇಜಿಸಲಾಗುತ್ತದೆ ಅದನ್ನು ನಂತರ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಗುತ್ತದೆ.
 
"ವಿದ್ಯಾರ್ಥಿಗಳಿಗೆ ಆಯಾ ವಿಭಾಗದ ಮುಖ್ಯಸ್ಥರು ಒಂದು ವಾರದ ವೇಳಾಪಟ್ಟಿಯನ್ನು ಬಹಳ ಮುಂಚೆಯೇ ಕಳುಹಿಸುತ್ತಾರೆ. ತಂತ್ರಜ್ಞಾನದ ಆಸಕ್ತಿಯ ತಲೆಮಾರು ಆಗಿರುವುದರಿಂದ ನಾವು ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆಯುತ್ತಿದ್ದು ಶೇ.90ರಷ್ಟು ಮಂದಿ ಅವರ ಪುನರಾವರ್ತನೆ ಮತ್ತು ಸ್ಟಡಿ ಪ್ಲಾನ್‍ಗಳನ್ನು ಪ್ರತಿನಿತ್ಯ ಸಲ್ಲಿಸುತ್ತಿದ್ದಾರೆ" ಎಂದು ಸ್ಕೂಲ್ ಆಫ್ ಕಾಮರ್ಸ್‍ನ ನಿರ್ದೇಶಕ ಡಾ.ವಾಸು ಬಿ.ಎ. ಹೇಳಿದರು.
 
"ಸಿಬ್ಬಂದಿಗೆ ವರ್ಚುಯಲ್ ತರಗತಿಗಳ ತಂತ್ರಜ್ಞಾನಗಳು ಮತ್ತು ಸಾಧನಗಳ ಕುರಿತು ವಿಶೇಷ ತರಬೇತಿ ಒದಗಿಸಲಾಗಿದೆ. ಕೆಲ ವಿದ್ಯಾರ್ಥಿಗಳಿಗೆ ಇಂಟರ್‍ನೆಟ್ ಸಂಪರ್ಕ ಸಮಸ್ಯೆಯಾಗಿದ್ದರೂ ನಾವು ಈ ಸಮಸ್ಯೆಯನ್ನು ಎಲ್‍ಎಂಎಸ್ ಪ್ಲಾಟ್‍ಫಾರಂನಲ್ಲಿ ರೆಕಾರ್ಡ್ ಮಾಡಲಾದ ತರಗತಿಗಳನ್ನು ಒದಗಿಸುವ ಮೂಲಕ ನಿವಾರಿಸಿದ್ದೇವೆ" ಎಂದರು.
 
ಈ ಕುರಿತು ಜೈನ್(ಡೀಮ್ಡ್-ಟು-ಬಿ ಯೂನಿವರ್ಸಿಟಿ)ನ ಅಧ್ಯಕ್ಷ ಡಾ.ಚೆನ್‍ರಾಜ್ ರಾಯ್‍ಚಂದ್, "ನಮ್ಮ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸರಿಯಾದ ಬೆಂಬಲ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸತತವಾಗಿ ಆವಿಷ್ಕರಿಸುತ್ತಿದ್ದಾರೆ ಮತ್ತು ಆನ್‍ಲೈನ್ ಸಹಯೋಗವನ್ನು `ಫಿಟ್ ಫಾರ್ ದಿ ಪರ್ಪಸ್' ಸಾಧನಗಳು ಮತ್ತು ಪ್ಲಾಟ್‍ಫಾರಂಗಳ ರೆಪರ್ಟರಿ ಬಳಸಿ ಮಹತ್ತರ ಫಲಿತಾಂಶಗಳನ್ನು ಸಾಧಿಸುತ್ತಿದ್ದಾರೆ.
 
ಜೈನ್(ಡೀಮ್ಡ್-ಟು-ಬಿ ಯೂನಿವರ್ಸಿಟಿ)
 
ದೇಶದ ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ರ್ಯಾಂಕ್ ಪಡೆದ ಜೈನ್(ಡೀಮ್ಡ್-ಟು-ಬಿ ಯೂನಿವರ್ಸಿಟಿ) ಅತ್ಯಾಧುನಿಕ ಕ್ಯಾಂಪಸ್‍ಗಳು, 89 ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಹಯೋಗಗಳನ್ನು ಹೊಂದಿದ್ದು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿವರ್ಷ ಮುಂಚೂಣಿಯ ಕಂಪನಿಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ನೇಮಕವಾಗುತ್ತಿದ್ದಾರೆ. ಪ್ರತಿಭೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಸಿದ್ಧ ಇತಿಹಾಸ ಹೊಂದಿರುವ ಇದು ತನ್ನ ಅತ್ಯಾಧುನಿಕ, ಆವಿಷ್ಕಾರಕ ಉದ್ಯಮಕ್ಕೆ ಸೂಕ್ತ ಕೋರ್ಸ್‍ಗಳಿಗೆ ಖ್ಯಾತಿ ಪಡೆದಿದೆ.


ಇದರಲ್ಲಿ ಇನ್ನಷ್ಟು ಓದಿ :