ಬೆಂಗಳೂರು,ಅ.26 : ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಿರುವುದರಿಂದ ಹೊಸ ರೂಪಾಂತರಿ ಎವೈ4.2 ವೈರಸ್ನಿಂದ ಹೆಚ್ಚಿನ ಆತಂಕ ಎದುರಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದಾಗ ಮ್ಯೂಟೇಷನ್ ಹೆಚ್ಚಾಗುತ್ತದೆ. ರೂಪಾಂತರ ಆಗುವುದನ್ನು ತಡೆಗಟ್ಟಲು ಆಗುವುದಿಲ್ಲ. ಜನರು ರೋಗ ನಿರೋಧಕ ಲಸಿಕೆ ಪಡೆಯುವ ಮೂಲಕ ಕೊರೊನಾ ನಿಯಂತ್ರಿಸಬಹುದು. ಪ್ರಕೃತಿಯಲ್ಲಿರುವ ಕೋಟ್ಯಂತರ ವೈರಸ್ಗಳಲ್ಲಿ ಇದು ಕೂಡ ಒಂದಾಗಿದೆ