ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಓದಿದ ಶಾಲೆಗೆ ಇದೀಗ ಬೀಗ ಬಿದ್ದಿದೆ. ಶಿಕ್ಷಕರಿಲ್ಲದೇ ಈ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಬಂದಿದೆ. ಸರ್ಕಾರವೇ ಕಳೆದ 10 ವರ್ಷಗಳಿಂದ ಈ ಶಾಲೆಗೆ ಶಿಕ್ಷಕರನ್ನು ನೇಮಿಸಿಲ್ಲ. ಹೀಗಾಗಿ ಶಾಲೆ ಮುಚ್ಚಬೇಕಾದ ಅನಿವಾರ್ಯತೆ ಬಂದಿದೆ. ವಿಷ್ಣುವರ್ಧನ್, ಹಿರಿಯ ಪೋಷಕ ನಟ ರಮೇಶ್ ಭಟ್ ಸೇರಿದಂತೆ ಇಂದು ಖ್ಯಾತನಾಮರಾಗಿರುವ ಹಲವರು ಓದಿದ ಶಾಲೆಯಿದು.ಚಾಮರಾಜ ಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಮಾಡೆಡಲ್ ಸ್ಕೂಲ್ ಎಜುಕೇಷನ್ ಸೊಸೈಟಿಯ ಪ್ರೌಢಶಾಲೆಯ