ಆಂಧ್ರ ಪ್ರದೇಶದ ವಿಶಾಖಪಟ್ಟಣದ ಸಮೀಪ ವಿಷಾನಿಲ ಸೋರಿಕೆ ಪ್ರಕರಣದಿಂದ ಅಪಾರ ಸಾವುನೋವು ಉಂಟಾಗಿದೆ. ಇದು ತೀರಾ ದುರ್ದೈವದ ಘಟನೆಯಾಗಿದೆ. ಈ ದುರ್ಘಟನೆಯಿಂದ ನೊಂದವರಿಗೆ ನನ್ನ ಸಾಂತ್ವನಗಳು. ವಿಷಾನಿಲದ ಆಘಾತಕ್ಕೆ ಸಿಲುಕಿ ತೊಂದರೆಗೆ, ಅನಾರೋಗ್ಯಕ್ಕೆ ಈಡಾಗಿರುವವರು ಮತ್ತು ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.ಈ ಘಟನೆ ಸಂಭವಿಸಿದ ಪ್ರದೇಶದಲ್ಲಿ ನಮ್ಮ ಕರ್ನಾಟಕ ರಾಜ್ಯದಿಂದ ತೆರಳಿದವರು ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಪತ್ತೆ ಮಾಡಬೇಕಿದೆ. ಅವರಿಗೆ ತಕ್ಷಣಕ್ಕೆ ಸೂಕ್ತ ಮಾಹಿತಿ