ಇಂದು ಹೊಸ ವರ್ಷದ ಮೊದಲ ದಿನ. ಕ್ಯಾಲೆಂಡರ್ ಬದಲಾಯಿಸುವ ದಿನ. ಕಳೆದು ಹೋದ ದಿನ, ಕಹಿ ನೆನಪು, ನೋವು ಎಲ್ಲವನ್ನೂ ಮರೆತು ಹೊಸ ಹರುಷದಿಂದ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಗಿದೆ. ಸದ್ಯ ಬೆಂಗಳೂರಿಗರು ಹೊಸ ವರ್ಷದ ಮೊದಲ ದಿನದಂದು ದೇವಸ್ಥಾನಗಳತ್ತ ಮುಖ ಮಾಡಿದ್ದಾರೆ. ಕೈ ಮುಗಿದು ದೇವರಲ್ಲಿ ಬೇಡಿ ಹೊಸ ವರ್ಷ ಸುಖ, ಸಂತೋಷ, ನೆಮ್ಮದಿ ತೆರಳಿ ಎಂದು ಪ್ರಾರ್ಥಿಸುತ್ತಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಜನರ ಭೇಟಿ ಹೆಚ್ಚಾಗಿದೆ.