ಬಿಬಿಎಂಪಿಯ ಕಂದಾಯ ಅಧಿಕಾರಿ ಹೆಬ್ಬಾಳ ವಿಭಾಗ, ಸಂಜಯ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕಡ್ಡಾಯ ಮತದಾನಕ್ಕಾಗಿ ಜಾಗೃತಿ ಮೂಡಿಸಲು ಮೇಣದ ಬತ್ತಿ ಬೆಳಗಿಸುವ ಮೂಲಕ ಜಾಥಾ ಕಾರ್ಯಕ್ರಮಕ್ಕೆ ವಲಯ ಆಯುಕ್ತರಾದ ರವೀಂದ್ರ ಪಿ.ಎನ್, ಅಪರ ಜಿಲ್ಲಾ ಚುನಾವಣಾಧಿಕಾರಿ(ಉತ್ತರ) ಮತ್ತು ಜಂಟಿ ಆಯುಕ್ತರು(ಮಹದೇವಪುರ) ಲಿಂಗಮೂರ್ತಿ, ಪೂರ್ವ ಜಂಟಿ ಆಯುಕ್ತರಾದ ಪಲ್ಲವಿ ಕೆ.ಆರ್, ಚುನಾವಣೆ ಅಧಿಕಾರಿಗಳಾದ ಪ್ರಸನ್ನ ಕುಮಾರ್ ರವರು ಚಾಲನೆ ನೀಡಿದರು.