ಎಲ್ಲೆಲ್ಲೂ ನೀರು ಎಚ್ಚರ ಎಚ್ಚರ!

ಬೆಂಗಳೂರು| Ramya kosira| Last Modified ಗುರುವಾರ, 25 ನವೆಂಬರ್ 2021 (20:07 IST)

ಚೆಕ್ ಡ್ಯಾಮ್ ನೋಡಲು ಹೋಗಿದ್ದ ವೇಳೆ ಇಬ್ಬರು ಕಾಲು ಜಾರಿ ಮೃತಪಟ್ಟಿರುವ ಘಟನೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಹಾಲಿಗೊಂಡನಹಳ್ಳಿ ಸಮೀಪದ ಘಟನೆ ನಡೆದಿದ್ದು, 35 ವರ್ಷದ ಸೋಮಶೇಖರ್, 8 ವರ್ಷದ ಬಾಲಕಿ ಮೌನಿಷ ಸಾವನ್ನಪ್ಪಿದ್ದಾರೆ. ಗ್ರಾಮದ ಸಮೀಪದಲ್ಲಿರುವ ಚೆಕ್ ಡ್ಯಾಂ ತುಂಬಿದ್ದರಿಂದ ನೋಡಲು ಹೋಗಿದ್ದರು, ಈ ವೇಳೆ ಮೌನಿಷ, ಕೀರ್ತಿ ಎಂಬ ಮಕ್ಕಳು ಕಾಲು ಜಾರಿ ಚೆಕ್ ಡ್ಯಾಂನಲ್ಲಿ ಬಿದ್ದಿದ್ದರು. ಇಬ್ಬರು ಮಕ್ಕಳನ್ನ ಕಾಪಾಡಲು ಸೋಮಶೇಖರ್ ನೀರಿಗೆ ದುಮುಕ್ಕಿದ್ದರು. ಕೀರ್ತಿಯನ್ನ ರಕ್ಷಿಸಿದ ಸೋಮಶೇಖರ್, ಮೌನಿಷ ರಕ್ಷಿಸಲು ತಾವು ಉಸಿರು ಚೆಲ್ಲಿದ್ದಾರೆ.. ಇನ್ನು ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..


ಇದರಲ್ಲಿ ಇನ್ನಷ್ಟು ಓದಿ :