ಬೆಂಗಳೂರು: ಮಲ್ಲೇಶ್ವರಂ ನ ಬಿಜೆಪಿ ಕಚೇರಿಯ ಎದುರು ಮಹದಾಯಿ ಹೋರಾಟಗಾರರ ಪ್ರತಿಭಟನೆ ಮುಂದುವರಿದಿದ್ದು, ಹೋರಾಟಗಾರರು ರಾಜಭವನದವರೆಗೆ ಪಾದಯಾತ್ರೆ ಮಾಡುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಬಿಜೆಪಿ ಕಚೇರಿಯಿಂದ ಪಾದಯಾತ್ರೆಯ ಮೂಲಕ ರಾಜಭವನದವರೆಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ನಂತರ ಪಾದಯಾತ್ರೆಯ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ತೆರಳಿ ಮನವಿ ಪತ್ರ ಸಲ್ಲಿಸಿ, ನಂತರ ಚುನಾವಣಾ ಆಯೋಗಕ್ಕೆ ಕೂಡ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಹೆಚ್.ಡಿ. ದೇವಗೌಡರ ಮನೆಗೂ ತೆರಳುವ