ಕಾರವಾರ : ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಆಸೆ ತೋರಿಸಿ, ಸೀಬರ್ಡ್ ನೌಕಾನೆಲೆಯ ಅಧಿಕಾರಿಯ ಪತ್ನಿಗೇ 1.17 ಲಕ್ಷ ರೂ. ವಂಚಿಸಿರುವ ಘಟನೆ ಕಾರವಾರದಲ್ಲಿ ನಡೆದಿದೆ.ಮಹಿಳೆ ಆನ್ಲೈನ್ನಲ್ಲಿ ಉದ್ಯೋಗ ಮಾಹಿತಿ ಹುಡುಕುತ್ತಿದ್ದ ವೇಳೆ ಸಿಕ್ಕ ಶಾಪ್ಪೀ ಎಂಬ ಮೊಬೈಲ್ ಆ್ಯಪ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಂಡಿದ್ದರು. ಅದರಲ್ಲಿ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದಿಸಿ ಎಂಬ ಜಾಹೀರಾತನ್ನು ಕಂಡು, ತನ್ನ ವಾಟ್ಸಪ್ನಲ್ಲಿ ಸಂಪರ್ಕಕ್ಕೆ ಮುಂದಾಗಿದ್ದಾರೆ.ವಂಚಕರು ಮೊದಲು ಕಮಿಷನ್ ರೂಪದಲ್ಲಿ ಅಲ್ಪ