ವಿಶ್ವದ ದೊಡ್ಡಣ್ಣನ ಸಾರಥ್ಯ ವಹಿಸಿರುವ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ. ಇರಾನ್ ನ ಸೇನಾ ಕಮಾಂಡರ್ ಆಗಿದ್ದ ಸುಲೇಮಾನಿ ಹತ್ಯೆಗೆ ಸಂಬಂಧಿಸಿದಂತೆ ಇರಾನ್, ಅಮೆರಿಕ ಅಧ್ಯಕ್ಷರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.ಇಂಟರ್ ಪೋಲ್ ಮೊರೆ ಹೋಗಿರುವ ಇರಾನ್, ಸುಲೇಮಾನಿ ಕೇಸ್ ಗೆ ಸಂಬಂಧಿಸಿದಂತೆ ಪಾಲ್ಗೊಂಡವರನ್ನು ಬಂಧಿಸುವಂತೆ ಆಗ್ರಹ ಮಾಡುತ್ತಿದೆ.ಈ ನಡುವೆ ಅಮೆರಿಕಾ ಅಧ್ಯಕ್ಷರ ಬಂಧನವಾಗುತ್ತಾ ಅನ್ನೋ ಕುತುಹೂಲ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ.