ಜಲ ಪ್ರಳಯ: ಪರಿಹಾರದಲ್ಲಿ ಕೇಂದ್ರ ತಾರತಮ್ಯ ಮಾಡುವುದಿಲ್ಲ ಎಂದ ಕೇಂದ್ರ ಸಚಿವ!

ಮಂಗಳೂರು| Jagadeesh| Last Modified ಭಾನುವಾರ, 19 ಆಗಸ್ಟ್ 2018 (14:03 IST)
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ. ಸದಾನಂದ ಗೌಡ, ಈಗಾಗಲೇ ಎನ್ ಡಿ ಆರ್ ಎಫ್
ಪಡೆ, ನೌಕಾ
ಹೆಲಿಕ್ಯಾಪ್ಟರ್ ಗಳನ್ನೂ ಎಲ್ಲ ಕಡೆಗೆ
ಕಳುಹಿಸಿ ಕೊಟ್ಟಿದೆ. ಜಲ ಪ್ರಳಯದಿಂದಾಗಿ
ಕೊಡಗು ಜಿಲ್ಲೆಗೆ ಭಾರೀ ಹಾನಿ ಆಗಿದೆ. 2000 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಗೆ ಒಳಗಾಗಿವೆ.

ರಾಜ್ಯ ಸರಕಾರ ಅಗತ್ಯವಿರುವ ನೆರವುಗಳ ಕುರಿತು ಪಟ್ಟಿ ಸಲ್ಲಿಸಿದರೆ, ಕೇಂದ್ರ ಸರಕಾರ ಎಲ್ಲಾ ನೆರವು ನೀಡಲಾಗುವುದು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಭೇಟಿ ಮಾಡಿ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಇದರಲ್ಲಿ ಇನ್ನಷ್ಟು ಓದಿ :