ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮುಂಗಾರು ಹಂಗಾಮಿಗೆ ಆಲಮಟ್ಟಿ ಎಡದಂಡೆ ಕಾಲುವೆಗೆ ಇಂದಿನಿಂದ ನೀರು ಹರಿಯಲು ಆರಂಭಗೊಳ್ಳಲಿದೆ. ಇತ್ತೀಚಿಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್ಲಾ ಕಾಲುವೆಗಳಿಗೆ 17 ರ ಮಧ್ಯರಾತ್ರಿಯಿಂದ ನೀರು ಹರಿಯಬೇಕಿತ್ತು. ಆದರೆ ಆಲಮಟ್ಟಿ ಎಡದಂಡೆ ಕಾಲುವೆಯ ಆಧುನೀಕರಣ ಕಾರ್ಯ ನಡೆದಿದ್ದರಿಂದ, ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಎರಡು ದಿನ ಕಾಲಾವಕಾಶ ಅಗತ್ಯವಿತ್ತು. ಸದ್ಯ ಕಾಲುವೆಯ ಆಧುನೀಕರಣ ಕಾರ್ಯ ಸ್ಥಗಿತಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಅವಕಾಶ ಕಲ್ಪಿಸುವ