ಅಮರ್ಜಾ ಅಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಮರ್ಜಾ ಆಣೆಕಟ್ಟು ವ್ಯಾಪ್ತಿಯಲ್ಲಿ ಬರುವ ಕೊರಳ್ಳಿ, ಭೂಸನೂರ, ದೇವಂತಗಿ, ಧಂಗಾಪೂರ ಹಾಗೂ ಬಟ್ಟರಗಾ ಗ್ರಾಮಗಳಲ್ಲಿನ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜೂನ್ 4ರ ಬೆಳಿಗ್ಗೆ 10 ಗಂಟೆಯಿಂದ ಏಳು ದಿನಗಳವರೆಗೆ ಹಂತ ಹಂತವಾಗಿ ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಕಾಲುವೆಗಳಿಗೆ ಹರಿಬಿಡಲಾಗುತ್ತದೆ.ಹೀಗಂತ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಲಬುರಗಿ ಐಪಿಸಿ ವಿಭಾಗ ನಂ.1ರ