ಬೆಂಗಳೂರು: ಕಳೆದ ವರ್ಷ ನನ್ನ ಮದುವೆಯಾಯಿತು.ಮನೆಯವರೇ ನಿಶ್ಚಯಿಸಿದ ಮದುವೆ ಇದು. ಮದುವೆಯಾದ ಎರಡನೇ ದಿನಕ್ಕೆ ನನ್ನ ಗಂಡನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ. 24 ಗಂಟೆಯಲ್ಲಿ ಒಂದು ನಿಮಿಷವೂ ನನ್ನ ಜತೆ ಮಾತನಾಡುತ್ತಿಲ್ಲ. ಹಾಗೇ ನಮ್ಮಿಬ್ಬರ ನಡುವೆ ದೈಹಿಕ ಸಂಪರ್ಕವೂ ನಡೆದಿಲ್ಲ. ನಾನು ಸುಂದರವಾಗಿಲ್ಲ ಎಂಬುದೇ ಅವರು ನನ್ನ ಜತೆ ಬೆರೆಯದೇ ಇರುವುದಕ್ಕೆ ಕಾರಣವಂತೆ. ನನ್ನ ಅತ್ತೆಗೆ ಈ ವಿಷಯ ಗೊತ್ತಾಗಿ ನನ್ನ ಕೆಲಸ ಬಿಡಿಸಿ ಮನೆಯಲ್ಲಿಯೇ ಇರು ಎಂದು ಹೇಳಿದ್ದಾರೆ.