ಬೈ ಎಲೆಕ್ಷನ್ ಗೆಲ್ಲೋದು ನಾವೇ!

ಬೀದರ್, ಭಾನುವಾರ, 5 ಮೇ 2019 (17:40 IST)


ನಮ್ ಮುಖಂಡರಿಗೆ ಗ್ರಾಮ ಪಂಚಾಯತಿವಾರು ಜವಾಬ್ದಾರಿ ಕೊಡಲಾಗಿದೆ. ಈ ಹಿಂದೆ ಈ ಕ್ಷೇತ್ರಗಳಲ್ಲಿ ನಾವೇ ಗೆದ್ದಿದ್ದೇವು. ಈಗಲೂ ಗೆಲುವು ನಮ್ಮದೇ… ಹೀಗಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಹೇಳಿದ್ದಾರೆ.

ಬೈ ಎಲೆಕ್ಷನ್ ನಲ್ಲಿ ಡಿಸಿಎಂ ಪರಮೇಶ್ವರ್, ಪ್ರಿಯಾಂಕ ಖರ್ಗೆ, ಎಂ.ಬಿ. ಪಾಟೀಲ್, ತುಕಾರಾಂ, ರಾಜಶೇಖರ್ ಪಾಟೀಲ್ ಸೇರಿದಂತೆ ಹಲವರಿಗೆ ಜವಾಬ್ದಾರಿ ಹಂಚಲಾಗಿದೆ.

ಕುಂದಗೋಳ ಮತ್ತು ಚಿಂಚೋಳಿ ಯಲ್ಲಿ ನಾವು ಗೆಲ್ಲುವುದು ಖಚಿತ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಮುಗಿದಿದೆ. ಈಗ ಎರಡು ಕ್ಷೇತ್ರಗಳ ವಿಧಾನ ಸಭಾ ಉಪ ಚುನಾವಣೆ ನಡೆಯುತ್ತಿವೆ. ಚಿಂಚೋಳಿ ಕ್ಷೇತ್ರ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತೆ ಎಂದರು.

ಕುಟುಂಬ ರಾಜಕಾರಣ ಅಂತ ಪಕ್ಷ ಬಿಟ್ಟು ಹೋಗಿದ್ದ ಉಮೇಶ್ ಜಾಧವ್ ಈಗ ತಮ್ಮ ಪುತ್ರನನ್ನ ಕಣಕ್ಕೆ ಇಳಿಸಿ ಕುಟುಂಬ ರಾಜಕಾರಣ ಅವರೇ ಮಾಡುತ್ತಿರುವುದನ್ನ ಸಾಬೀತು ಮಾಡಿದ್ದಾರೆ ಎಂದು ಟೀಕೆ ಮಾಡಿದ್ರು.  

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯರನ್ನು ಕೆಣಕಿ ಉಗಿಸಿಕೊಂಡ ಸಂಸದ!

ಕೆಣಕಿದ ಸಂಸದ ರಾಜೀವ್ ಚಂದ್ರಶೇಖರ್ ಗೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ...

news

ಬಾವಿಗೆ ಬಿದ್ದದ್ದು ಏನು ಗೊತ್ತಾ? ಶಾಕಿಂಗ್

ದೇವಸ್ಥಾನದ ಬಾವಿಯೊಂದರಲ್ಲಿ ಅಪರೂಪದ ಅತಿಥಿ ಬಿದ್ದ ಘಟನೆ ನಡೆದಿದೆ.

news

ಹಂಪಿ ಎಕ್ಸಪ್ರೆಸ್ ರೈಲು ಮಾರ್ಗ ಬದಲು: ನೀಟ್ ಎಕ್ಸಾಮ್ ವಿದ್ಯಾರ್ಥಿಗಳ ಪರದಾಟ

ಹಂಪಿ ಎಕ್ಸ್ ಪ್ರೆಸ್ ರೈಲು ಮಾರ್ಗ ಬದಲಾವಣೆ ಮಾಡಿರೋದು ನೀಟ್ ಎಕ್ಸಾಮ್ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ...

news

ಪ್ರಧಾನಿ ಹುದ್ದೆಗಾಗಿ ದೇವೇಗೌಡರಿಂದ ಪೂರ್ಣಾಹುತಿ ಯಾಗ?

ಸ್ವತಃ ಜೆಡಿಎಸ್ ಮುಂಖಡರನ್ನೇ ಹೋಮ ಹವನ ನಡೆಯುವ ಸ್ಥಳಕ್ಕೆ ಬಿಡದಂತೆ ನಡೆಸಿರುವ ಮಾಜಿ ಪ್ರಧಾನಿಯ ಧಾರ್ಮಿಕ ...