Widgets Magazine

ಮುಂದಿನ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದ ಸಚಿವ!

ಮಂಡ್ಯ| Jagadeesh| Last Modified ಮಂಗಳವಾರ, 29 ಜನವರಿ 2019 (18:15 IST)
ಕೆಲವು ಕಾಂಗ್ರೆಸ್ ಶಾಸಕರು
ಹದ್ದು ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ಸಿಎಂ ಎಚ್ಡಿಕೆ ನಿನ್ನೆ ಬೇಜಾರಿನಲ್ಲಿ ಸಿಎಂ‌ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧ ಎಂದು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಅವರ ಶಾಸಕರನ್ನ ಹದ್ದುಬಸ್ತುನಲ್ಲಿ ಇಟ್ಟುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಕ್ಕೆ ನಾವು ಜವಬ್ದಾರರಲ್ಲ ಎಂದ ಸಚಿವರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಸಿಎಸ್ ಪುಟ್ಟರಾಜು ಹೇಳಿಕೆ ನೀಡಿದ್ದು,
ಬಿಜೆಪಿ ಜೊತೆಗೆ ಹೋಗುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಬಿಜೆಪಿಯೊಂದಿಗೆ ನಾವು ಸರ್ಕಾರ ನಡೆಸಿದ್ದಾಗ ಇಡೀ ರಾಜ್ಯ ಮೆಚ್ಚಿತ್ತು. ಕೃಷ್ಣದೇವರಾಯರ ಕಾಲ‌ ಮರುಕಳಿಸಿದೆ ಅನ್ನೋ ರೀತಿಯಲ್ಲಿ ಆಡಳಿತ ಇತ್ತು. ಆದರೆ ಕಾಂಗ್ರೆಸ್ ಶಾಸಕರು ಬೆಳಿಗ್ಗೆ ಎದ್ದರೆ ಬೀದೀಲಿ ಮಾತನಾಡುತ್ತ ನಿಲ್ಲುತ್ತಾರೆ.

ಸಿದ್ದರಾಮಯ್ಯ ಅವರು ರೂಪಿಸಿದ್ದ ಕಾರ್ಯವನ್ನು ಅನುಷ್ಠಾನ ಗೊಳಿಸಲು ಎಚ್ಡಿಕೆ ಕೆಲಸ ಮಾಡ್ತಿದ್ದಾರೆ. ಫೆ.6 ರಂದು
ಮಂಡಿಸುವ ಬಜೆಟ್ ಜನರ ಪರವಾಗಿ, ಜನರ ಮಧ್ಯೆನಿಂತು ಕೆಲಸ ಮಾಡುವ ಬಜೆಟ್ ಆಗಲಿದೆ ಎಂದರು.
ಇದರಲ್ಲಿ ಇನ್ನಷ್ಟು ಓದಿ :