ಬೆಂಗಳೂರು : ಯಾವುದೇ ರೀತಿಯ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.ಕೋವಿಡ್-19 ಕುರಿತು ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಎಸ್ಸಿ ಅಧ್ಯಕ್ಷರಾದ ಸುದರ್ಶನ್ ಅವರು ಈ ಕುರಿತು ನಮಗೆ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ಓಮಿಕ್ರಾನ್ ಕುರಿತು ಸಹ ಮಾಹಿತಿಯನ್ನು ನೀಡಿದ್ದಾರೆ. ಈಗಿರುವ ಪಾಸಿಟಿವಿಟಿ ರೇಟ್ ನೋಡಿದರೆ ಬಹಳ ಗಾಬರಿಯಾಗುವಂತಹ ಅವಶ್ಯಕತೆ ಇಲ್ಲ ಎಂಬುದು ಅವರ ವಾದವಾಗಿದೆ ಎಂದು ತಿಳಿಸಿದರು. ಗಡಿಭಾಗದಲ್ಲಿ ಈಗಿರುವ ಕಟ್ಟೆಚ್ಚರವನ್ನು