ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳನ್ನ ಮಾಡಿದ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅಕ್ಕಿ ಕೂಡ ಮುಂದಿನ ತಿಂಗಳಿಂದ ಆಗಲಿದೆ.ಗೃಹ ಲಕ್ಷ್ಮಿ ಯೋಜನೆ ಕೂಡ ಜಾರಿ ಆಗಲಿದೆ.ಮನೆ ಯಜಮಾನಿ ಯಾರು ಅಂತ ಅವರೇ ತೀರ್ಮಾನ ಮಾಡಲಿ,ಬೆಲೆ ಏರಿಕೆ ಗಮನದಲ್ಲಿ ಇಟ್ಟುಕೊಂಡು ಇದನ್ನು ಮಾಡ್ತಾ ಇದ್ದೀವಿ.ಒಂದು ತಿಂಗಳು ಅವಕಾಶ ಇರಲಿದೆ.ನಮಗೆ ಬೇಡ ಅಂತ ಅನೇಕರು ಕಾಗದ ಬರೆದಿದ್ದಾರೆ.ಅವರದ್ದೇ ಆದ ಖಾತೆ ಇರಬೇಕು.ಆಗಸ್ಟ್ 15 ರಂದು ನಾವು ಇದನ್ನು ಲಾಂಚ್ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.