ಬಿಜೆಪಿ ಪಕ್ಷಕ್ಕೆ ನೆಗಡಿಯಷ್ಟೆ ಬಂದಿದೆಯೇ ಹೊರತು ಬೇರೆ ರೋಗ ಬಂದಿಲ್ಲ ಎಂದು ಪಕ್ಷದಲ್ಲಿರುವ ಭಿನ್ನಮತ ಕುರಿತಂತೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿವರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಅಸಮಾಧಾನವಿರುವುದು ಸತ್ಯ ಸಂಗತಿ. ನಾವೆಲ್ಲರು ಒಂದು ಕಡೆ ಕುಳಿತು ಅಸಮಾಧಾನವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಪಕ್ಷದಲ್ಲಿ ಅಸಮಾಧಾನವಿದೆ ಎಂದ ಮಾತ್ರಕ್ಕೆ ಪಕ್ಷವನ್ನು ತೊರೆದುಹೋಗುವಂತಹದಲ್ಲ. ದೇಶದಲ್ಲಿಯೇ ಬೃಹತ್ ಪಕ್ಷವಾದ ಬಿಜೆಪಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಅವುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗುತ್ತೇವೆ