ಬೆಳಗಾವಿ : ಫೆ.27ರಂದು ಬೆಳಗಾವಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ ಹೇಳಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಬೆಳಗಾವಿ ಗಂಡುಮೆಟ್ಟಿದ ನೆಲಕ್ಕೆ ಪ್ರಧಾನಮಂತ್ರಿ ಬರುತ್ತಿದ್ದಾರೆ. ಮೊದಲ ಬಾರಿಗೆ ಕರ್ನಾಟಕದಿಂದ ರೈತ ಕಿಸಾನ್ ಸಮ್ಮಾನ್ ಯೋಜನೆ ನಿಧಿ ರೈತ ಖಾತೆಗೆ ಹಾಕಲಿದ್ದಾರೆ.ಕಳೆದ ಬಾರಿ ದೆಹಲಿ ಗ್ರಾಮೀಣ ಪ್ರದೇಶದಿಂದ ರೈತರ ಖಾತೆಗೆ 22 ಸಾವಿರ ಕೋಟಿ ಹಣವನ್ನು ಹಾಕಿದ್ದಾರೆ.