ಮುಂದಿನ ವರ್ಷ 2023ರಲ್ಲಿ ಬಿಜೆಪಿ ಪಕ್ಷಕ್ಕೆ ರೈತರು, ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗದವರಿಂದ ಬೆಂಬಲ ವ್ಯಕ್ತವಾಗಲಿದ್ದು, ಸರ್ಕಾರದ ಉತ್ತಮ ಆಡಳಿತ ಈ ವರ್ಗದ ಜನರ ಮನ ತಟ್ಟಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೊಸಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿ ವಿಜಯನಗರ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ವಿಜಯನಗರ ರಾಜ್ಯದ ಪವಿತ್ರ ಸ್ಥಳವಾಗಿದ್ದು, ಬಿಜೆಪಿ ನ್ಯಾಯದ ತತ್ವಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಧರಿಸಿ ಪ್ರಜಾಸತ್ತಾತ್ಮಕ