ಬೆಂಗಳೂರು : ಸೋಮವಾರ ನೂರಕ್ಕೆ ನೂರರಷ್ಟು ಬಹುಮತವನ್ನು ಸಾಬೀತು ಪಡಿಸುತ್ತೇವೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ನೂರಕ್ಕೆ ನೂರರಷ್ಟು ಬಹುಮತವನ್ನು ಸಾಬೀತು ಪಡಿಸುತ್ತೇವೆ. ಸಿಎಂ ಬಿಎಸ್ ಯಡಿಯೂರಪ್ಪ ಒಬ್ಬ ಹೋರಾಟಗಾರ. ಸ್ವಪ್ರಯತ್ನದಿಂದ ರೈತನಾಯಕನಾಗಿ ಹೊರಹೊಮ್ಮಿದವರು. ಬಂದ ತಕ್ಷಣ ರೈತರ ಪರವಾದ ನಿರ್ಣಯ ಕೈಗೊಂಡಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ನೇಕಾರರಿಗೆ ಆದ್ಯತೆ ನೀಡ್ತಾರೆ ಎಂದು ಅವರು ತಿಳಿಸಿದ್ದಾರೆ. ಹಾಗೇ