ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಆರ್ ಅಶೋಕ ಅವರು ಆ ಜವಾಬ್ದಾರಿಯನ್ನು ತ್ಯಜಿಸಿರುವ ಕತೆ ನಿಮಗೆ ಗೊತ್ತಿದೆ. ಅದಕ್ಕೂ ಮೊದಲು, ಜಿಲ್ಲೆಯ ಹಲವಾರು ಭಾಗಗಳಲ್ಲಿ ಅಶೋಕ ಗೋ ಬ್ಯಾಕ್ ಅಂತ ಹಲವು ಅಭಿಯಾನಗಳು ನಡೆದಿದ್ದವು. ಇದೇ ಹಿನ್ನೆಲೆಯಲ್ಲಿ ಕೆ.ಆರ್. ಪೇಟೆ ಶಾಸಕ ಮತ್ತು ಸಚಿವ ಕೆ.ಸಿ.ನಾರಾಯಣಗೌಡ ಅವರು ಕ್ಷೇತ್ರದ ಸಂತೆಬಾಚಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ತಮಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವುದು ಬೇಕಿಲ್ಲ ಎಂದರು. ಹಾಗಾದರೆ ಅವರು ಯಾವುದಾದರೂ ಅಭ್ಯರ್ಥಿಯನ್ನು