ಬೆಳಗಾವಿ : ನಾವು ಯಾರಿಗೂ ಬರಬೇಡಿ ಅಂತ ಹೇಳಿಲ್ಲ. ನಮ್ಮ ಸಿದ್ಧಾಂತ ಒಪ್ಪಿ ಬರೋದಾದರೆ ಬರಲಿ, ಅವರನ್ನ ನಾವು ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರು ಯಾರು ಬರುತ್ತಾರೆ ಅಂತ ನನಗೆ ಗೊತ್ತಿಲ್ಲ. ಆದರೆ ಬರ್ತಾರೆ ಎನ್ನುವ ಮಾತಿದೆ. ಬರುವವರನ್ನ ನಾವು ಕರೆದುಕೊಳ್ಳುತ್ತೇವೆ ಎಂದರು. 135 ಶಾಸಕರಿದ್ದರೂ ಬೇರೆ ಶಾಸಕರ ಅವಶ್ಯಕತೆ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅವಶ್ಯಕತೆ ಪ್ರಶ್ನೆ