ದೆಹಲಿಯಲ್ಲಿ ಎರಡು ಬಾರಿ ಸರಕಾರ ರಚನೆ ಮಾಡಿದೆವು. ಪಂಜಾಬ್ ನಲ್ಲಿ ಸರಕಾರ ರಚಿಸಿದೆವು. ಈಗ ಕರ್ನಾಟಕದಲ್ಲಿ ಸರಕಾರ ರಚನೆ ಮಾಡಿaಯೇ ಮಾಡುತ್ತೇವೆ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ರೈತ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಹಿಂದೆ 20 ಪರ್ಸೆಂಟ್ ಸರಕಾರ ಇತ್ತು. ಈಗ 40 ಪರ್ಸೆಂಟ್ ಸರಕಾರ ಇದೆ.