ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಗ್ಯಾರಂಟಿಗಳಿಗೆ ಸೆಡ್ಡು ಹೊಡೆಯುವಂತಹ ಗ್ಯಾರಂಟಿಗಳನ್ನ ನಾವು ಕೊಡ್ತೇವೆ ಅಂತ ಬಸನಗೌಡ ಆರ್ ಪಾಟೀಲ್ ಯತ್ನಾಳ್ ಹೇಳಿದರು. ಚಿಕ್ಕಬಳ್ಳಾಪುರ ನಗರದ ಪ್ರಥಮ ದರ್ಜೆ ಕಾಲೇಜು ಕಟ್ಟಡ ಪರಿಶೀಲನೆ ಸಂಬಂಧ ಆಗಮಿಸಿದ್ದ ಯತ್ನಾಳ್ ಮಾಧ್ಯಮಗಳ ಜೊತೆ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸೀಟು ಬಿಜೆಪಿ ಗೆಲ್ಲಲಿದೆ ಎಂದರು.ಇನ್ನೂ ಎಂದೂ ಸಹ ನಾನು ಮಂತ್ರಿಗಿರಿಗಾಗಿ ಅಧ್ಯಕ್ಷ ಪಟ್ಟಕ್ಕಾಗಿ ಲಾಬಿ ಮಾಡಿದನವಲ್ಲ. ಬಿಜೆಪಿ