ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಸರಕಾರ ರಚಿಸುವುದಿಲ್ಲ ಸ್ವಂತ ಬಲದ ಮೇಲೆ ಜೆಡಿಎಸ್ ಸರಕಾರ ರಚಿಸುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಚನ್ನಪಟ್ಟಣದಲ್ಲಿ ತಿಳಿಸಿದ್ರು. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಪರ ಮತಯಾಚನೆ ಮಾಡಿದ್ರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ನಡೆಸಿ ಪಟ್ಟಣದ ಸೇರ್ವಹೋಟೆಲ್ ಬಳಿ ಮುಸ್ಲಿಂ ಭಾಂಧವರನ್ನ ಉದ್ದೇಶಿಸಿ ಹೆಚ್ಡಿಡಿ ಬಹಿರಂಗವಾಗಿ ಮಾತನಾಡಿದ್ರು. ಹೆಚ್ಡಿಕೆ ಮುಖ್ಯಮಂತ್ರಿಯಾಗಲು ಬಿಜೆಪಿ ಜತೆಗೆ ಕೈಜೋಡಿಸುತ್ತಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ