ರಾಜ್ಯದ ಹಲವೆಡೆ ಮಳೆ ಮುಂದುವರಿದಿರುವಂತೆ ಪ್ರವಾಹ ಪರಿಸ್ಥಿತಿ ಇನ್ನೂ ಕೊನೆಗೊಂಡಿಲ್ಲ. ಏತನ್ಮಧ್ಯೆ ಹವಾಮಾನ ವೈಪರೀತ್ಯವು ಪರಿಹಾರ ಕಾರ್ಯಾಚರಣೆ ಅಡ್ಡಿಯಾಗಿದೆ.ಮಡಿಕೇರಿ, ಕೊಡಗು ಸೇರಿದಂತೆ ಮೊದಲಾದ ಜಲ ಪ್ರಳಯದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಬಿರುಸಿನ ಪ್ರಯತ್ನ ಮುಂದುವರಿದಿದೆ. ಈ ನಡುವೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಕಾರ್ಯಾಚರಣೆ ನಡೆಸಲು ಪ್ರತಿಕೂಲ ಹವಾಮಾನ ತಡೆಯೊಡ್ಡುತ್ತಿದೆ. ಹೀಗಾಗಿ ಪರಿಹಾರ ಕಾರ್ಯಾಚರಣೆಗೆ ತಾತ್ಕಾಲಿಕ ಅಡ್ಡಿಯುಂಟಾಗುತ್ತಿದೆ.ಮಡಿಕೇರಿಯಲ್ಲಂತೂ ನೀರು ಹಾಗೂ ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಸೇನೆ ಹಾಗೂ ಎನ್ ಡಿ