ವೆಬ್ದುನಿಯಾ ಸಂಸ್ಥೆಗೆ ಸೆಪ್ಟೆಂಬರ್ 23 ತುಂಬಾ ಮಹತ್ವದ ದಿನ. ಸಂಸ್ಥೆಯ ಆರಂಭದ ದಿನವಾಗಿದೆ. ವಿಶ್ವದಲ್ಲಿಯೇ ಹಿಂದಿ ಪೋರ್ಟಲ್ ಆರಂಭಿಸಿದ ಮೊದಲ ಸಂಸ್ಥೆ ಎನ್ನುವ ಗೌರವ ಪಡೆದಿದೆ. ಕೇವಲ ಒಂದು ಸಣ್ಣ ಕೋಣೆಯಲ್ಲಿ ಆರಂಭವಾದ ವೆಬ್ದುನಿಯಾ ಸಂಸ್ಥೆ ಬೃಹದಾಕಾರವಾಗಿ ಬೆಳೆದು ನಿಂತಿರುವುದು ಯಾವ ರೋಚಕತೆಗೂ ಕಮ್ಮಿಯಿಲ್ಲ. 1998ರಲ್ಲಿ ಆರಂಭವಾದ ಸಂಸ್ಥೆ ಬಹುಭಾಷಾ ಇ-ಮೇಲ್ ಸೌಲಭ್ಯ, ಇ-ಪತ್ರಗಳಿಗೆ ಚಾಲನೆ ನೀಡಿತು.