ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಕೆಲಸವಿದೆ ಎಂದು ವೆಬ್ ಸೈಟ್ ನಲ್ಲಿ ವಂಚನೆ

ಬೆಂಗಳೂರು| Last Modified ಮಂಗಳವಾರ, 14 ಜುಲೈ 2020 (09:46 IST)

ಬೆಂಗಳೂರು : ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಇದೆ ಎಂದು ನಂಬಿಸಿ ಟೆಕ್ಕಿಯೊಬ್ಬರಿಗೆ ಹಣ ವಂಚಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

 


ಅಮೃತ್ ಹಳ್ಳಿ ನಿವಾಸಿ 26 ವರ್ಷದ  ಸಾಫ್ಟ್ ವೇರ್ ಉದ್ಯೋಗಿಯೊಬ್ಬ ಲಾಕ್ ಡೌನ್ ಹಿನ್ನಲೆಯಲ್ಲಿ ಅವರ ಕಂಪೆನಿಯಲ್ಲಿ ಕೆಲಸದಿಂದ ತೆಗೆದುಹಾಕುವ ಆತಂಕದಿಂದ ವೆಬ್ ಸೈಟ್ ಗಳಲ್ಲಿ ಬೇರೆ ಕೆಲಸ ಹುಡುಕಾಡುತ್ತಿದ್ದರು. ಆ ವೇಳೆ ವೆಬ್ ಸೈಟ್ ಒಂದಕ್ಕೆ ಕರೆ ಮಾಡಿದಾಗ ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಕೆಲಸವಿದೆ. ಅದಕ್ಕೆ ವೇತನ ಕೂಡ ನೀಡಲಾಗುವುದು ಎಂದು ತಿಳಿಸಿದ್ದರು.

ಇದಕ್ಕೆ ಟೆಕ್ಕಿ ಒಪ್ಪಿದಾಗ ಆತನಿಂದ ಕಂಪೆನಿ ಸದಸ್ಯತ್ವ, ನೊಂದಣಿ ಶುಲ್ಕ ವೆಂದು ಒಟ್ಟು 83,500 ರೂ ತೆಗೆದುಕೊಂಡಿದ್ದಾರೆ. ಆದರೆ ಕೊನೆಗೂ ಉದ್ಯೋಗ ನೀಡದೆ ವಂಚಿಸಿದ್ದಾರೆ. ಈ ಬಗ್ಗೆ ಟೆಕ್ಕಿ ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

 
ಇದರಲ್ಲಿ ಇನ್ನಷ್ಟು ಓದಿ :