ಡೆಡ್ಲಿ ಕೊರೊನಾ ವೈರಸ್ ಜೊತೆಗೆ ಹೋರಾಟ ನಡೆಸಿ ಗೆದ್ದು ಬಂದವನಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಕೊರೊನಾ ಮಾರಿಯನ್ನು ಗೆದ್ದುಬಂದ ನಂಜನಗೂಡು ಜುಬಿಲಿಯಂಟ್ ಕಾರ್ಖಾನೆಯ ನೌಕರನಿಗೆ ಮಂಡ್ಯದ ಸ್ವರ್ಣಸಂದ್ರ ಬಡಾವಣೆಯಲ್ಲಿ ಸ್ವಾಗತ ಕೋರಲಾಯಿತು.ಸ್ವರ್ಣಸಂದ್ರ ಬಡಾವಣೆಯ 33 ವಾರ್ಡ್ ನ ನಿವಾಸಿಯೂ ಆದ ಜುಬಿಲಿಯಂಟ್ ಕಾರ್ಖಾನೆಯ ನೌಕರನಿಗೆ ಬಡಾವಣೆಯ ನಿವಾಸಿಗಳು ಆರತಿ ಬೆಳಗಿ ಬರಮಾಡಿಕೊಂಡರು.ಸಹೋದ್ಯೋಗಿಯ ಸಂಪರ್ಕದಿಂದಾಗಿ ಕೊರೊನಾ ಸೋಂಕು ತಗುಲಿ ಮಂಡ್ಯದ ಮಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಈತ ಈಗ ಸಂಪೂರ್ಣ ಗುಣಮುಖನಾಗಿದ್ದಾನೆ. ಕುಟುಂಬಸ್ಥರು