ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಅವರು ಪ್ರಧಾನಿ ಮೋದಿಯವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ನಂಬಿಕೆ ದೇವರು. ಜನ ಒಬ್ಬ ವ್ಯಕ್ತಿಯನ್ನ ನಂಬಬೇಕಾದರೆ ಅವನ ನಡೆನುಡಿ ಅಳೆದುತೂಗಿ ನಿರ್ಧರಿಸುತ್ತಾರೆ. ಆ ಮನುಷ್ಯ ಸರಿಕಂಡರೆ ಅವನ ಹಿಂಬಾಲಿಸುತ್ತಾರೆ. ಅದರಲ್ಲು ನಂಬಿಕೆ ಇಮ್ಮಡಿಯಾದರೆ ಆರಾಧಿಸುತ್ತಾರೆ. ಅದರಲ್ಲು ಸಮರ್ಥ ಅನಿಸಿದರೆ ಅವನ ಪೂಜಿಸುತ್ತಾರೆ. ಭಾರತೀಯರು ಮೋದಿಯವರನ್ನ