ಬೆಂಗಳೂರು : ಬಹುಸಂಖ್ಯಾತ ಹಿಂದೂಗಳ ಪ್ರಮುಖ ಬೇಡಿಕೆಯಾದ, ಮುಜುರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ. ದೇಗುಲಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತ ಮಾಡುವಂತೆ ಭಕ್ತರು ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದು ಸಿಎಂ ಪ್ರಕಟಿಸಿದರು. * ಮುಜುರಾಯಿ ಇಲಾಖೆಯ ದೇಗುಲಗಳಿಗೆ ಸ್ವಾಯತ್ತತೆ* ದೇವಾಲಯಗಳ ಅಭಿವೃದ್ಧಿಗೆ 158 ಕೋಟಿ ರೂ. ಅನುದಾನ* ಅರ್ಚಕರು, ಆಗಮಿಕರು, ನೌಕರರ ತಸ್ತಿಕ್ ಹಣ