ತುಂಬಾ ಅರ್ಜಂಟ್ ವಿಷ್ಯ ಇದೆ. ಒಂದೇ ಒಂದು ಕಾಲ್ ಮಾಡಿ ಕೊಡುವೆ ನಿಮ್ಮ ಮೊಬೈಲ್ ಕೊಡಿ ಅಂತ ಹೇಳಿ ಮೊಬೈಲ್ ಪಡೆಯುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದು ಮಾಡಬಾರದ ಕೆಲಸ ಮಾಡುತ್ತಿತ್ತು.ಕಾಲ್ ಮಾಡಿ ಕೊಡುತ್ತೇನೆಂದು ಜನರಿಂದ ಮೊಬೈಲ್ ತೆಗೆದುಕೊಂಡು ಪರಾರಿಯಾಗುತಿದ್ದ ಕತರ್ನಾಕ್ ಗ್ಯಾಂಗ್ ನ್ನು ಪೊಲೀಸರು ಬಂಧನ ಮಾಡಿದ್ದಾರೆ.ಹಿರೇಪಾಳ್ಯ ಗೇಟ್ ನಲ್ಲಿ ಯುವಕನ ಬಳಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಕಳ್ಳರು. ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಗ್ರಾಮಸ್ಥರು.