ರೋಡಿಗೆ ಬಂದ ಅನರ್ಹ ಶಾಸಕ ಮಾಡಿದ್ದೇನು?

ಮಂಡ್ಯ, ಬುಧವಾರ, 14 ಆಗಸ್ಟ್ 2019 (20:37 IST)

ಅನರ್ಹ ಶಾಸಕರೊಬ್ಬರು ರೋಡಿಗೆ ಬಂದು ಈ ಕೆಲಸ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ಪಟ್ಟಣದಲ್ಲಿ ಡಾ.ನಾರಾಯಣಗೌಡ ಮತ್ತು ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ರು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಹಾಗೂ ನಿರಾಶ್ರಿತರಿಗೆ ನಿಧಿ ಮತ್ತು ಜೀವನಾವಶ್ಯಕ ವಸ್ತುಗಳನ್ನು ಸಂಗ್ರಹಿಸಲಾಯಿತು.

ಎಪಿಎಂಸಿ ಮಾರುಕಟ್ಟೆ, ಎಳನೀರು ಮಾರುಕಟ್ಟೆ, ಮೈಸೂರು ರಸ್ತೆ, ಮುಖ್ಯರಸ್ತೆ, ನಾಗಮಂಗಲ ರಸ್ತೆ, ಹಳೇ ಕಿಕ್ಕೇರಿ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದ ಶ್ರೀಗಳು ಮತ್ತು ನಾರಾಯಣಗೌಡ, ವರ್ತಕರು ಮತ್ತು ಸಾರ್ವಜನಿಕರಿಂದ ಜೀವನಾವಶ್ಯಕ ವಸ್ತುಗಳನ್ನು ಸಂಗ್ರಹಿಸಿದರು.

ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂ ಸೇವಕರು ಸೇರಿದಂತೆ ನೂರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಡಿಯೂರಪ್ಪ ಕಾಲಿನ ಗುಣವೇ ಸರಿ ಇಲ್ವಂತೆ

ಮೈತ್ರಿ ಸರಕಾರ ಪತನವಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಬಿಎಸ್ ವೈ ಕಾಲಿನ ...

news

ಈ ಕಾರಣಕ್ಕೆ ಶಾಸಕರ ಮನೆ ಮುಂದೆ ಅಹೋರಾತ್ರಿ ಕುಳಿತ ಮಂದಿ

ಶಾಸಕರ ಮನೆ ಮುಂಭಾಗದಲ್ಲಿ ಏಕಾಏಕಿಯಾಗಿ ಸಾವಿರಾರು ಜನರು ಜಮಾಯಿಸಿ ಅಹೋರಾತ್ರಿ ಕುಳಿತುಕೊಂಡಿದ್ದರು.

news

ಅನರ್ಹ ಶಾಸಕರಿಗೆ ಬಿಜೆಪಿ ಗೋರಿ ಕಟ್ಟಿದೆ; ನಾವು ಪೂಜೆ ಮಾಡ್ತೇವೆ

ಅನರ್ಹಗೊಂಡಿರೋ ಶಾಸಕರಿಗೆ ಕಮಲ ಪಾಳೆಯದ ಮುಖಂಡರು ಗೋರಿ ಕಟ್ಟಿದ್ದಾರೆ. ಹೀಗಂತ ಕೈ ಪಡೆಯ ಮುಖಂಡ ಟಾಂಗ್ ...

news

ಸಿಟ್ಟಾದ ಕಾಡಾನೆ ತುಳಿದು ಕೊಂದದ್ದು ಯಾರನ್ನು ಗೊತ್ತಾ?

ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿರೋ ಭೀಕರ ಘಟನೆ ನಡೆದಿದೆ.