ಬೆಂಗಳೂರು : ಮದುವೆಯಾಗುವ ನೆಪಯೊಡ್ಡಿ ಗೆಳೆಯನೊಬ್ಬ ಗೆಳತಿಯಿಂದ 11.5 ಲಕ್ಷ ರೂ ಸುಲಿಗೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾಲೇಜು ದಿನಗಳಲ್ಲಿ ಸಂಬಂಧ ಬೆಳೆಸಿದ ಆರೋಪಿ ಹಾಗೂ ಸಂತ್ರಸ್ತೆ ಕೆಲಸ ಸಿಕ್ಕಿದ ಬಳಿಕ ಮದುವೆಯಾಗುವ ನಿರ್ಧಾರ ಮಾಡಿದ್ದರು, ಇದಕ್ಕೆ ಇಬ್ಬರ ಮನೆಯವರು ಒಪ್ಪಿಕೊಂಡಿದ್ದರು. ಹೀಗಾಗಿ ಯುವತಿ ತಾನು ದುಡಿದ ಹಣವನ್ನು ಆರೋಪಿಯ ಜೊತೆ ಜಂಟಿ ಖಾತೆ ಮಾಡಿ ಅದರಲ್ಲಿ ಇಡುತ್ತಿದ್ದಳು. ಆದರೆ ಆರೋಪಿ ಅದರ ಮೇಲೆ ಸಾಲ ತೆಗೆದು ಪರಾರಿಯಾಗಿದ್ದಾನೆ.ಈ